Friday, October 10, 2008

ಕನ್ನಡ ಜನಪ್ರಿಯ ಒಗಟುಗಳು

೧. ಹಸಿರು ಮುಖಕ್ಕೆ ವಿಪರೀತ ಕೋಪ , ಕೋಪ ಮಾಡಿಕೊಳ್ಳದೆ ನಾನ್ಯಾರೆಂದು ಹೇಳಿ?-ಮೆಣಸಿನಕಾಯಿ
೨. ಅಜ್ಜಿ ಗುದ್ದಿದರೆ ಮನೆಯೆಲ್ಲ ಮಕ್ಕಳು ಈಗ ಹೇಳಿ ನಾನ್ಯಾರು-ಬೆಳ್ಳುಳ್ಳಿ
೩. ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ ?ನಾನ್ಯಾರು ಹೇಳಿ?-ನಕ್ಷತ್ರ
೪. ಮೂರೂ ಪಕ್ಷಿಗಳು ಗೂಡಿಗೆ ಹೋಗುವಾಗ ಬೇರೆ ಬೇರೆ ಬಣ್ಣ ಬರುವಾಗ ಬಣ್ಣ-ಎಲೆ ಅದಿಕೆ
೫. ಆಕಾಶದೊಳಗಿನ ಗಿಣಿ ಊಟದ ಹೊತ್ತಿಗೆ ರಾಣಿ-ಬಾಳೆಲೆ
೬. ಎರಡು ಬಾವಿಗಳ ನಡುವೆಯೊಂದು ಸೇತುವೆ-ಮೂಗು
೭. ತಲೆ ಇಲ್ಲ , ನಡು ಇಲ್ಲ , ಕೈಗಳಿದ್ದರು ಬೆರಳಿಲ್ಲ-ಕೋಟು ಅಂಗಿ
೮. ತಿಂಡಿಗೆ ಕಡಿಮೆ ಇಲ್ಲ ,ತೀರ್ಥ ಕುಡಿದರೆ ಸಾವು -ವಿಷ
೯ . ಒಬ್ಬಳು ಮುಲುಗಿದಳು, ಒಬ್ಬಳು ಕರಗಿದಳು , ಒಬ್ಬಳು ತೇಲಿದಳು -ಅಡಿಕೆ , ಸುಣ್ಣ
೧೦.ಹೋಗೋದು ಮುಳುಗೋದು ತರೋದು ಏನು?-ಬಿಂದಿಗೆ
೧೧. ಕಿರೀಟ ಇದೆ ರಾಜ ಅಲ್ಲ, ಕಲ ತಿಳಿಸುತ್ತ್ತೆ ಗಡಿಯಾರವಲ್ಲ-ಕೋಳಿ
೧೨. ಒಂದು ಹಣ್ಣಿಗೆ ಹನ್ನೆರಡು ತೊಳೆ ಮತ್ತೂ ಮೂವತ್ತು ಬೀಜ-ವರ್ಷ
೧೩. ಗುಂಡಾಕಾರ ಮೈಯೆಲ್ಲಾ ತೂತು-ದೋಸೆ
೧೪.ಬಂಗಾರದ ಗುಬ್ಬಿ ಬಾಲದಲ್ಲೇ ನೀರನ್ನು ಕುಡಿಯುತ್ತೆ-ಚಿಮಿಣಿ
೧೫. ಒಂದು ಮರ , ಮರದಾಗ ಅಲ್ಲ, ಅಲ್ಲಿನಾಗ ಕೊಬ್ರಿ ಗುಂಡ-ಆಕಾಶ ನಕ್ಷತ್ರ ಚಂದ್ರ
೧೩.ಹಗ್ಗ ಹಾಸಿದೆ ಕೋಣ ಮಲಗಿದೆ-ಕುಂಬಳಕಾಯಿ, ಬಳ್ಳಿ
೧೪. ನನ್ನ ಕಂಡರೆ ಎಲ್ಲರು ಓದೀತಾರೆ -ಚೆಂಡು
೧೫. ಹಳ್ಳಿ ಗಡಿಯಾರ, ಒಳ್ಳೆ ಆಹಾರ-ಕೋಳಿ
೧೬. ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ ಯಾವುದು-ಏಲಕ್ಕಿ
೧೭. ಬೆಳ್ಳಿ ಬಟ್ಟಲಲ್ಲಿ ಮುತ್ತಿನ ಬಿಂದು-ತಾರೆ
೧೮. ಲಟಪಟ ಲೇಡಿಗೆ ಒಂದೇ ಕಣ್ಣು-ಸೂಜಿ
೧೯. ಹಸಿರು ಕೋಲಿಗೆ ಮುತ್ತಿನ ತುರಾಯಿ-ಜೋಳದ ತೆನೆ
೨೦. ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ-ನಾಲಿಗೆ
೨೧. ಸೂಜಿ ಸಣ್ಣಕಾಗೆ ಬಣ್ಣ -ಕೂದಲು
೨೩. ಆರು ಕಾಲಿನ ಆನೆ, ಆನೆ ತಿನ್ನುತ್ತೆ ನೀರು ಕುಡಿಯಲ್ಲ-ನುಸಿ
೨೪. ಊರಿಗೆಲ್ಲ ಒಂದೇ ಕಂಬಳಿ-ಆಕಾಶ
೨೫. ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ-ಕುಂಕುಮ
೨೬. ಕರಿ ಹೊಲದ ಮದ್ಯದಲ್ಲಿ ಬೇಲಿ ದಾರಿ-ಬೈತಲೆ
೨೭. ಒಂದು ಬತ್ತಿ ಮನೆಯೆಲ್ಲ ಬೆಳಕು-ಸೂರ್ಯ
೨೮.ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೋದಿಲ್ಲ -ಗಾಳಿ
೨೯. ಕಣ್ಣಿಗೆ ಹತ್ತಿರ ಕಾಲಿಗೆ ದೂರ-ಬೆಟ್ಟ
೩೦. ಊಟಕ್ಕೆ ಮೊದಲು ನಾನು ಅಂತ ಬರುತ್ತೆ -ಬಾಳೆ ಎಲೆ , ತಟ್ಟೆ

No comments: